ಬೆಂಗಳೂರು: ನ್ಯೂ ಇಂಡಿಯಾ ಚರ್ಚ್ ಆಫ್ ಗಾಡ್‌ನ ಯುವ ವಿಭಾಗವಾದ ಯಂಗ್ ಪೀಪಲ್ ಕ್ರಿಶ್ಚಿಯನ್ ಅಸೋಸಿಯೇಷನ್ (ವೈಪಿಸಿಎ ಕರ್ನಾಟಕ) ವತಿಯಿಂದ ನವೆಂಬರ್ 1ರಂದು (ಭಾನುವಾರ)ಸಾಮೂಹಿಕ ಸಮ್ಮೇಳನ “ಬ್ರೇಕ್ ಥ್ರೂ ಆನ್‌ಲೈನ್‌ನಲ್ಲಿ ಯುವಕರಿಗಾಗಿ ಆಯೋಜಿಸಲಾಗಿದೆ. ಜೂಮ್‌ನಲ್ಲಿ ನಡೆಯುವ ಈ ಸಮ್ಮೇಳನ ಸಂಜೆ 7:00 ಗಂಟೆಗೆ ಪ್ರಾರಂಭವಾಗಲಿದೆ. ರೆ. ಬಿಜು ಥಾಂಪಿ ಮುಖ್ಯ ಸಂದೇಶವನ್ನು ನೀಡಲಿದ್ದಾರೆ. ಪಾಸ್ಟರ್ ಸ್ಯಾಮ್ಯುಯೆಲ್ (ಬೆಳಗಾವಿ) ನೇತೃತ್ವದ ಗಾಯಕ ತಂಡದವರು ಸಂಗೀತ ಸೇವೆಯನ್ನು ಮಾಡಲಿದ್ದಾರೆ. ವೈಪಿಸಿಎ ಯೂಟ್ಯೂಬ್ ಮತ್ತು ಫೇಸ್‌ಬುಕ್ ಚಾನೆಲ್‌ಗಳಲ್ಲೂ ನೇರ ಪ್ರಸಾರವಾಗಲಿದೆ.
ವೈಪಿಸಿಎ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಪಾಸ್ಟರ್ ರಾಯ್ ಜಾರ್ಜ್ ಬೆಂಗಳೂರು ಈ ಕೂಟಕ್ಕೆ ಎಲ್ಲರನ್ನು ಸ್ವಾಗತಿಸುತ್ತಿದ್ದಾರೆ.
zoom I.D.: 8104 36 4521
passcode: ypca