ಪ್ರಾಸ್ಟರ್ ಲಿಜು ಕೋಶಿಯ (IPC ಕರ್ನಾಟಕ) ಮಾವನಾಗಿರುವ ಚಂದ್ರಶೇಖರ್ ಅನಿಗೋಲ್ ಬೆಂಗಳೂರಿನಲ್ಲಿ ನಿಧನರಾದರು.

ಬೆಂಗಳೂರು: ಐಪಿಸಿ ಸಭೆಯ ಸಭಾ ಪಾಲಕರಾದ ಪಾ.ಲಿಜು ಕೋಶಿ (ಶಾಲೋಮ್ ಧ್ವನಿ ಕರ್ನಾಟಕ ವಿಭಾಗ) ರವರ ಮಾವ ಬ್ರ.ಚಂದ್ರಶೇಖರ್ ಅನಿಗೋಲ್ (67) ರವರು ಕರ್ತನ ಸನ್ನಿಧಿಗೆ ಸೇರಿಸಲ್ಪಟ್ಟರು. ಎಂಎಸ್ ಪಾಳ್ಯ ಬೆತೆಲ್ ಐಪಿಸಿ ಸಭೆಯ ಸದಸ್ಯರಾಗಿದ್ದರು. ಶವ ಸಂಸ್ಕಾರ ನಾಳೆ (ಶನಿವಾರ) ಬೆಳಿಗ್ಗೆ 11.30ಕ್ಕೆ ಹೊಸೂರು ರಸ್ತೆಯಲ್ಲಿರುವ ಕ್ರಿಶ್ಚಿಯನ್ ಸಮಾಧಿಯಲ್ಲಿ ನಡೆಯಲಿದೆ.

ಅವರು ಗುಡ್ ಶೆಫರ್ಡ್ ಮಿಷನ್ ಶಾಲೆಯ ಅಧ್ಯಕ್ಷರಾಗಿದ್ದರು ಮತ್ತು ಭಾರತ್ ಮಿಷನ್ ಸಲಹಾ ಮಂಡಳಿಯ ಸದಸ್ಯರಾಗಿದ್ದರು.
ಮಕ್ಕಳು: ಮಂಜುನಾಥ್, ಸಂದೀಪ್, ಸ್ತುತಿ ಮತ್ತು ಮಹಿಮಾ.
ಅಳಿಯಂದಿರು: ಅಶ್ವಿನಿ, ಸಂಧ್ಯಾ, ಪಾ. ಲಿಜು ಕೋಶಿ, ಅರುಣ್.

ದುಃಖಿತರಾದ ಕುಟುಂಬಕ್ಕೆ ದೇವರು ಸಾಂತ್ವನ ಮತ್ತು ಭರವಸೆಯನ್ನು ನೀಡಲೆಂದು ಶಾಲೋಮ್ ಧ್ವನಿ ಕುಟುಂಬದ ವತಿಯಿಂದ ಪ್ರಾರ್ಥಿಸುವವರಾಗಿದ್ದೇವೆ.

Comments (0)
Add Comment