ಬೆಂಗಳೂರು: ಮೈಸೂರು ಮಾರ್ಗದ ನಾಯಂಡಳ್ಳಿ ಫ್ಲೈ ಓವರ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಬೆಂಗಳೂರಿನಿಂದ ಮೈಸೂರಿಗೆ ಬಸ್ ಹೊರಟಿತ್ತು. ಚಾಲನೆ ವೇಳೆ ಏರ್ ಲಿಫ್ಟ್ ಕಟ್ಟಾದ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದೆ. ಇನ್ನು ಬಸ್ಸಿನಲ್ಲಿ 20 ಪ್ರಯಾಣಿಕರಿದ್ರು, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಅಪಘಾತ ಮಾತ್ರ ಭಯಾನಕವಾಗಿ ನಡೆದಿದ್ದು, ಏನಾದ್ರೂ ಹೆಚ್ಚು ಕಡಿಮೆ ಆಗಿದ್ದರೇ ಪ್ಲೈ ಓವರ್ ಕೆಳಗೆ ಬಸ್ ಹಾರುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ಬಸ್ ಅಲ್ಲಿಗೆ ನಿಂತಿದ್ದರಿಂದ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.
ಮೈಸೂರು ಡಿಪೋ 1ರ ಬಸ್.. ಡಿವೈಡರ್ ಮೇಲೆ ಹತ್ತಿ ಪಕ್ಕದ ರಸ್ತೆಗೆ ಬಂದಿದೆ. ಭಯಾನಕವಾಗಿ ಈ ಅಪಘಾತಗೊಂಡಿದ್ದು, ರಸ್ತೆಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಲ್ಲದೇ ಬಸ್ಸಿನ ಮುಂಭಾಗದ ಎರಡು ಚಕ್ರಗಳೂ ಕಟ್ ಆಗಿವೆ.