ಬೆಂಗಳೂರು: ಐಪಿಸಿ ಕರ್ನಾಟಕ ರಾಜ್ಯ ವಾರ್ಷಿಕ ಸಮಾವೇಶ 2021 ರ ಫೆಬ್ರವರಿ 7 ರಿಂದ 14 ರವರೆಗೆ ಹೊರಮಾವು ಆಗ್ರಾ ಐಪಿಸಿ ಕೇಂದ್ರ ಕಚೇರಿಯ ಅಂಗಣದಲ್ಲಿ ನಡೆಯಲಿದೆ. ಅಸ್ತಿತ್ವದಲ್ಲಿರುವ ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಕೂಟಗಳನ್ನು ನಡೆಸಲು ಸಭಾ ಮಂಡಳಿ ನಿರ್ಧರಿಸಿದೆ. ಎಲ್ಲರಿಗೂ ಆನ್ಲೈನ್ ಮಾಧ್ಯಮಗಳ ಮೂಲಕ ಭಾಗವಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ.
ದೇಶದಿಂದ ಮತ್ತು ವಿದೇಶದಿಂದ ದೇವರ ಪೂಜ್ಯ ಸೇವಕರು ದೇವರ ವಾಕ್ಯವನ್ನು ಹಂಚುತ್ತಿರುವರು. ಕೋವಿಡ್-19 ರ ಹಿನ್ನೆಲೆಯಲ್ಲಿ ಸಂಜೆ 6 ರಿಂದ 8 ರವರೆಗೆ ಮಾತ್ರ ಸಾಮಾನ್ಯ ಕೂಟಗಳು ನಡೆಯಲಿವೆ. ಪ್ರಸ್ತುತ ನಿಯಮಗಳು ಬದಲಾಗದಿದ್ದರೆ, ಕೋವಿಡ್ ನಿಯಂತ್ರಣಿಗಳು ಪೂರ್ಣವಾಗಿ ಅನುಸರಿಸಿ 200 ಜನರಿಗೆ ಮಾತ್ರ ಅಂಗಣದೊಳಗೆ ಪ್ರವೇಶ ಅನುಮತಿಸಲಾಗುತ್ತದೆ.
ವ್ಯಾಪಕ ಸಿದ್ಧತೆಗಳಿಗಾಗಿ, ಪಾಸ್ಟರ್ ಜೋಸ್ ಮ್ಯಾಥ್ಯೂ ಜನರಲ್ ಕನ್ವೀನರ್ ಆಗಿಯೂ ಹಾಗು ಪಾಸ್ಟರ್ ಎ.ವೈ. ಬಾಬು ಮತ್ತು ಸಹೋದರ ರೆಜೀ ಜಾರ್ಜ್ ಅವರನ್ನು ರಾಜ್ಯ ಕೌನ್ಸಿಲ್ ಕನ್ವೀನರ್ಗಳಾಗಿಯಾ ಆಯ್ಕೆ ಮಾಡಿತು. ವಿಶ್ವದಾದ್ಯಂತ ದೇವರ ಜನರಿಗೆ ವಿವಿಧ ಆನ್ಲೈನ್ ಮಾಧ್ಯಮಗಳ ಮೂಲಕ ಸಭೆಗಳನ್ನು ನೇರಪ್ರಸಾರ ವೀಕ್ಷಿಸಲು ಅವಕಾಶ ಮಾಡುತ್ತದೆ ಎಂದು ಜನರಲ್ ಕನ್ವೀನರ್ ಪಾಸ್ಟರ್ ಜೋಸ್ ಮ್ಯಾಥ್ಯೂ ಅವರು ಹೇಳಿದರು.