ನಿರಂತರವಾಗಿ ಜ್ವರ ಕಾಡ್ತಾ ಇದ್ಯಾ? ಡೆಂಗ್ಯೂ ಆಗಿರಬಹುದು, ಪರೀಕ್ಷಿಸಿಕೊಳ್ಳಿ

161

ಭಾರತೀಯರನ್ನು ಈ ಡೆಂಗ್ಯೂ ಎಂಬ ರೋಗ ಬೆಂಬಿಡದೇ ಕಾಡುತ್ತಿದ್ದು, 1780ರಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಈ ಸೋಂಕಿನ ಪರಿಣಾಮದ ಬಗ್ಗೆ ಸಂತ್ರಸ್ತರು ತಮ್ಮ ಭಯಾನಕ, ನೋವಿನ ಅನುಭವವನ್ನು ಹಂಚಿಕೊಂಡಿದ್ದಾರೆ. 

ಸ್ಥಳೀಯವಾಗಿ ಎಡೇಸ್ ಎಜೆಪ್ಟಿ ಎಂಬ ಸೊಳ್ಳೆಯಿಂದ ಡೆಂಗ್ಯೂ ಹರಡುತ್ತದೆ. ತೀವ್ರ ಜ್ವರ, ಸಂದು ನೋವು, ವಿಪರೀತ ತಲೆನೋವು, ತಲೆಸುತ್ತು, ವಾಂತಿ, ಮೈಯ್ಯಲ್ಲಿ ಬೊಬ್ಬೆ ಅಥವಾ ತ್ವಚಾ ಸವಕಳಿ ಈ ರೋಗದ ಮುಖ್ಯ ಲಕ್ಷಣಗಳು. ಪಾರ್ಶ್ವವಾಯು ಜ್ವರಕ್ಕೂ ಕಾರಣವಾಗಬಲ್ಲ ಡೆಂಗ್ಯೂವಿನಿಂದ ಕೆಲವರು ಸಾಕಷ್ಟು ಅನುಭವಿಸುತ್ತಾರೆ.

ಅದರಲ್ಲಿಯೂ ಇದೀಗ ಜನರು ಕೋವಿಡ್19 ಸಂಕಷ್ಟದಲ್ಲಿದ್ದು, ಈ ರೋಗ ಹಾಗೂ ರೋಗ ಲಕ್ಷಣಗಳ ಬಗ್ಗೆ ಸಾಕಷ್ಟು ಅರಿವು ಮೂಡಿಸಲಾಗುತ್ತಿದೆ. ಈ ಕೆಳಗಿನ ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಅಗತ್ಯವಿದೆ. ಆದರೆ, ಜ್ವರ ಬಂದ ಕೂಡಲೇ ಅದು ಕೋವಿಡ್ ಅಲ್ಲವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. 105 ಡಿಗ್ರಿ ತಾಪಮಾನಕ್ಕಿಂತಲೂ ಹೆಚ್ಚಿರುವ ನಿರಂತರ ಜ್ವರ ಕೋವಿಡ್ ಹಾಗೂ ಡೆಂಗ್ಯೂ ಎರಡೂ ರೋಗಗಳ ಲಕ್ಷಣವೂ ಹೌದು. ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ನಿರಂತರ ಜ್ವರದಿಂದ ಬಳಲುತ್ತಿದ್ದರೆ, ಕೆಳಗಿನ ಸೂಚನೆಗಳನ್ನು ಪಾಲಿಸಿ:
– ದೇಹದ ಉಷ್ಣಾಂಶವನ್ನು ಪದೆ ಪದೇ ಪರೀಕ್ಷಿಸಿಕೊಂಡು ನೋಟ್ ಮಾಡಿಟ್ಟುಕೊಳ್ಳಿ. ಅದು ಹೆಚ್ಚುತ್ತಿದ್ಯಾ ಅಥವಾ ಇಳಿಯುತ್ತಿದ್ಯಾ ಎಂಬುವುದು ಗಮನದಲ್ಲಿರಲಿ. ಇದು ವೈದ್ಯರಿಗೆ ರೋಗಕ್ಕೆ ಕಾರಣವಾದ ಸೋಂಕನ್ನು ಪತ್ತೆ ಹಚ್ಚಲು ನೆರವಾಗುತ್ತದೆ.

  • ಅಲ್ಲದೇ ರೋಗದ ಇತರೆ ಲಕ್ಷಣಗಳ ಬಗ್ಗೆ ನೋಟ್ ಮಾಡಿಟ್ಟುಕೊಳ್ಳಿ. ಕೋವಿಡ್ ಆದಲ್ಲಿ ನಾಲಿಗೆ ರುಚಿ ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಡೆಂಗ್ಯೂವಾದಲ್ಲಿ ಮೈಯಲ್ಲಿ ಗುಳ್ಳೆ, ಚರ್ಮದ ಸುಕ್ಕು ಹಾಗೂ ಕೆಲವು ದಿನಗಳ ನಂತರ ತಲೆ ಸುತ್ತು ಹಾಗೂ ವಾಂತಿ ಕಾಣಿಸಿಕೊಳ್ಳಬಹುದು.
  • ವೈದ್ಯರೊಂದಿಗೆ ಸಂಪರ್ಕದಲ್ಲಿದ್ದು ಬೆಳವಣಿಗೆಗಳ ಬಗ್ಗೆ ನಿರಂತರವಾಗಿ ವರದಿ ಮಾಡುತ್ತಿರಿ.
  • ಡೆಂಗ್ಯೂ ಅಥವಾ ಬೇರೆ ಸೋಂಕೋ ಎಂಬುದನ್ನು ಖಚಿತಪಡಿಸಿಕೊಳ್ಳಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ.
  • ಸಾಕಷ್ಟು ದ್ರವ ಪಾದಾರ್ಥಗಳನ್ನು ಸೇವಿಸಿ. ಜ್ವರದಿಂದ ದೇಹ ನಿರ್ಜಲೀಕರಣವಾಗದಂತೆ ತಡೆಯಿರಿ.

ವಿಶ್ವದೆಲ್ಲೆಡೆ ಜನರು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದು, ಸಾಮಾನ್ಯನಿಗೆ ರೋಗ ಲಕ್ಷಣಗಳು ಗೊಂದಲ ಸೃಷ್ಟಿಸಬಹುದು. ಕೆಲವರಿಗೆ ಕೋವಿಡ್ ಮಾರಾಣಾಂತಿಕವಾಗಿದ್ದು, ಡೆಂಗ್ಯೂ ಸಹ ಅಷ್ಟೇ ಅಪಾಯಕಾರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಡೆಂಗ್ಯೂ ಸಾವಿನ ಪ್ರಮಾಣ ಕೇವಲ ಶೇ.1ರಷ್ಟಾದರೂ, ಈ ರೋಗದಿಂದ ಸುಧಾರಿಸಿಕೊಳ್ಳಲು ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಡೆಂಗ್ಯೂ ತಡೆಯಲು ಸೊಳ್ಳೆ ನಾಶವೇ ಅತ್ಯುತ್ತಮ ಪರಿಹಾರವಾಗಿದ್ದು, ಸದಾ ಗೋದ್ರೇಜ್ ಕಾಲಾ ಹಿಟ್ ಬಳಸಿ.

Leave A Reply

Your email address will not be published.