UGC NET, UPSC ಪರೀಕ್ಷೆ ಮುಂದೂಡಿಕೆ

ನವದೆಹಲಿ, (ಏ.20): ದೇಶಾದ್ಯಂತ ಕೊರೋನಾ 2ನೇ ಅಲೆಯ ಅಬ್ಬರದಿಂದಾಗಿ ಮೇ 2ರಿಂದ ಮೇ.17ರವರೆಗೆ ನಿಗದಿಯಾಗಿದ್ದಂತ ಯುಜಿಸಿ ನೆಟ್ ಪರೀಕ್ಷೆಯನ್ನು ಮುಂದೂಡಲಾಗಿದೆ.

ಈ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಇಂದು (ಮಂಗಳವಾರ) ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ. 

ಮೇ 2ರಿಂದ ಆರಂಭಗೊಂಡು, ಮೇ.17ಕ್ಕೆ ಮುಕ್ತಾಯಗೊಳ್ಳಬೇಕಿದ್ದಂತ ಯುಜಿಸಿ ನೆಟ್ ಪರೀಕ್ಷೆಯನ್ನು ಕೊರೋನಾ ಸೋಂಕಿನ ಕಾರಣದಿಂದಾಗಿ ಮುಂದೂಡಿಕೆ ಮಾಡಲಾಗಿದ್ದು,  ಪರೀಕ್ಷೆಯ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಯುಪಿಎಸ್​​ಸಿ ಪರೀಕ್ಷೆ ಮುಂದಕ್ಕೆ
ದೇಶದಲ್ಲಿ ಕೋವಿಡ್ – 19 ಪ್ರಕರಣಗಳು ಶೀಘ್ರವಾಗಿ ಏರುತ್ತಿರುವುದರಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಬೇಕಿದ್ದ ಹಲವಾರು ಪರೀಕ್ಷೆಗಳನ್ನು ಕೇಂದ್ರ ನಾಗರಿಕ ಸೇವಾ ಮಂಡಳಿ (ಯುಪಿಎಸ್‌ಸಿ) ಮುಂದೂಡಿದೆ.

ಉದ್ಯೋಗ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪರೀಕ್ಷೆ 2020, ನಾಗರಿಕ ಸೇವೆಗಳ ಪರೀಕ್ಷೆ (ಸಿಎಸ್‌ಇ) 2020 ಸಂದರ್ಶನಗಳು ಮತ್ತು ಹಲವಾರು ನೇಮಕಾತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆರೋಗ್ಯ ಪರಿಗಣನೆಗಳು, ಲಾಕ್‌ಡೌನ್ ನಿರ್ಬಂಧಗಳು ಮತ್ತು ಸಾಮಾಜಿಕ ಅಂತರವಿಡುವ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಸದ್ಯಕ್ಕೆ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ನಡೆಸದಿರಲು ನಿರ್ಧರಿಸಿದೆ.

Comments (0)
Add Comment