ಜಿಡ್ಡಿಲ್ಲದ ಕೋಳಿ ಮೊಟ್ಟೆ, ಕರಗಿಸುವುದು ನಿಮ್ಮ ಹೊಟ್ಟೆ..!

127

ಮೊಟ್ಟೆ ಪ್ರೊಟೀನ್ ಬ್ಯಾಂಕ್ ತರ. ಹಾಗಾಗಿಯೇ ಎಲ್ಲ ವಯಸ್ಸಿನವರಿಗೂ ಮೊಟ್ಟೆ ತಿನ್ನೋದಕ್ಕೆ ಅಡ್ಡಿ ಇಲ್ಲ. ಮೊಟ್ಟೆ ತಿಂದು ವೇಯಿಟ್ ಲಾಸ್ ಮಾಡ್ಬೋದು.. ಹೇಗೆ..? ಇಲ್ಲಿ ಓದಿ

ಜಿಮ್‌ಗಳಲ್ಲಿ ಮೊಟ್ಟೆ ಬೇಯಿಸಿ ತಿನ್ನಿ ಅನ್ನೋದೇಕೆ ಗೊತ್ತಾ…? ಬೇರೆ ರೆಸಿಪಿಗಳ ಮೂಲಕ ತಿನ್ನೋದಕ್ಕೂ, ಬರೀ ಬೇಯಿಸಿ ತಿನ್ನೋದಕ್ಕೂ ತುಂಬಾ ವತ್ಯಾಸವಿದೆ. ವೇಯಿಟ್ ಲಾಸ್ ಮಾಡೋಕೆ ಪ್ರಯತ್ನಿಸೋರು ಮೊದಲ ವಿಧಾನ ಟ್ರೈ ಮಾಡಿ

ಎಣ್ಣೆ ಇಲ್ಲದೆ ತಯಾರಿಸಬಹುದಾದ ಯಮ್ಮೀ ಮೊಟ್ಟೆಯ ರೆಸಿಪಿಗಳು ಇಲ್ಲಿವೆ ನೋಡಿ

ನಿಮ್ಮ ಡಯೆಟ್‌ನಲ್ಲಿ ಅಡುಗೆ ಎಣ್ಣೆ ಅವಾಯ್ಡ್ ಮಾಡ್ತಿದ್ದೀರಾ..? ಎಣ್ಣೆ ಇಲ್ಲದ ಅಡುಗೆಗೆ ಹೊಂದಿಕೊಳ್ಳೋದು ಕಷ್ಟ. ಆದ್ರೆ ನಿಮ್ಮ ಬಾಯಿಗೆ ರುಚಿಯಾಗಿಯೂ, ವೇಯಿಟ್ ಹೆಚ್ಚಾಗದಂತೆಯೂ ನೀವು ಈ ರೆಸಿಪಿಗಳನ್ನು ಮಾಡಬಹುದು

ಡಯಟಿಸ್ಟ್‌ಗಳು ಡಯಟ್ ಮೆನುವಲ್ಲಿ ಪ್ರೋಟಿನ್ ಹೆಚ್ಚಿರೋ ಆಹಾರ ವಸ್ತುಗಳನ್ನೇ ಸೇರಿಸ್ತಾರೆ. ಮುಖ್ಯವಾಗಿ ಮೊಟ್ಟೆ. ಬಟರ್ ಅಥವಾ ಅಡುಗೆ ಎಣ್ಣೆ ಇಲ್ಲದೆ ನೀವು ಈ ಮೊಟ್ಟೆ ರೆಸಿಪಿಗಳನ್ನು ಮಾಡಿ ಸವಿಯಿರಿ

ಕನಿಷ್ಠ ಆಮ್ಲೆಟ್ ಮಾಡೋಕು ಎಣ್ಣೆ ಬೇಕು. ಈಗ ನಿಮ್ಮ ಕೈಯಲ್ಲಿ ಉಳಿಯೋದು ಬೇಯಿಸಿದ ಮೊಟ್ಟೆ ರೆಸಪಿ ಮಾತ್ರ. ಇದು ದಿನವೂ ತಿನ್ನೋದಕ್ಕೆ ಬೋರಿಂಗ್. ಎಣ್ಣೆ ಇಲ್ಲದೆ ತಯಾರಿಸಬಹುದಾದ ಈ ರೆಸಿಪಿ ನೋಡಿ

ಬೇಯಿಸಿದ ಮೊಟ್ಟೆ: ಅರೆ ಬೇಯಿಸಿದ ಮೊಟ್ಟೆ ಸಾಫ್ಟ್ ಆಗಿ ಹೊಟ್ಟೆಗೂ ಹೆವಿ ಎನಿಸುವುದಿಲ್ಲ. ಸಣ್ಣ ಬೌಲ್‌ನಲ್ಲಿ ಮೊಟ್ಟೆ ಸಣ್ಣ ಕ್ರಾಕ್ ಮಾಡಿಡಿ. ಮೊಟ್ಟೆ ಹಳದಿ ಭಾಗ ಮಿಕ್ಸ್ ಆಗದಿರಲಿ. ಕುದಿಯೋ ನೀರಿಗೆ ಸ್ವಲ್ಪ ವಿನೇಗರ್, ಉಪ್ಪು ಹಾಕಿ ಈ ಮೊಟ್ಟೆ ಇದಕ್ಕೆ ಹಾಕಿ. 5-7 ನಿಮಿಷದಲ್ಲಿ ತೆಗೆದು ತಿನ್ನಿ

ಎಗ್ ಬುರ್ಜಿ: ಮಾಮೂಲಿಯಾಗಿ ಎಗ್ ಬುರ್ಜಿ ಮಾಡುವಂತೆಯೇ ಎಣ್ಣೆ ಇಲ್ಲದೆ ಇದನ್ನು ಮಾಡಬಹುದು. ಮೊಟ್ಟೆಯನ್ನು ಹಾಲಿನೊಂದಿಗೆ ಮಿಕ್ಸ್ ಮಾಡಿ. ವಿನೇಗರ್ ಹಾಕಿದ ಕುದಿಯೂ ನೀರಿಗೆ ಇದನ್ನು ಹಾಕಿ. ಇದನ್ನು ತಿರುವುತ್ತಾ ಇರಿ. ಮೊಟ್ಟೆ ನೀರನ್ನು ಹೀರಿಕೊಳ್ಳುತ್ತದೆ. ನೀರು ಆವಿಯಾದ ಮೇಲೆ ಉಪ್ಪು ಮತ್ತು ಇತರ ಮಸಾಲೆ ಬೆರೆಸಿ ತಿನ್ನಬಹುದು

ಎಗ್ ಬುರ್ಜಿ: ಮಾಮೂಲಿಯಾಗಿ ಎಗ್ ಬುರ್ಜಿ ಮಾಡುವಂತೆಯೇ ಎಣ್ಣೆ ಇಲ್ಲದೆ ಇದನ್ನು ಮಾಡಬಹುದು. ಮೊಟ್ಟೆಯನ್ನು ಹಾಲಿನೊಂದಿಗೆ ಮಿಕ್ಸ್ ಮಾಡಿ. ವಿನೇಗರ್ ಹಾಕಿದ ಕುದಿಯೂ ನೀರಿಗೆ ಇದನ್ನು ಹಾಕಿ. ಇದನ್ನು ತಿರುವುತ್ತಾ ಇರಿ. ಮೊಟ್ಟೆ ನೀರನ್ನು ಹೀರಿಕೊಳ್ಳುತ್ತದೆ. ನೀರು ಆವಿಯಾದ ಮೇಲೆ ಉಪ್ಪು ಮತ್ತು ಇತರ ಮಸಾಲೆ ಬೆರೆಸಿ ತಿನ್ನಬಹುದು

ಡೆವಿಲ್ಡ್ ಎಗ್: ಬೇಯಿಸಿದ ಮೊಟ್ಟೆಗೆ ಈರುಳ್ಳಿ, ಉಪ್ಪು, ಹಬ್ರ್ಸ್, ಕೊತ್ತಂಬರಿ ಸೊಪ್ಪು ಸೇರಿಸಬಹುದು. ಅಥವಾ ಮೊಟ್ಟೆಯ ಹಳದಿ ಭಾಗವನ್ನು ಬೇರ್ಪಡಿಸಿ ಹಾಲಿನೊಂದಿಗೆ ಬೇಯಿಸಿ ಇದೇ ರೆಸಿಪಿ ಮಾಡಬಹುದು

ವಿನೇಗರ್ ಹಾಕಿ ನೀರು ಕುದಿಸಿ. ನಂತರ ಮೊಟ್ಟೆ ಒಡೆದು ಮಿಕ್ಸ್ ಮಾಡಿ ಹಾಕಿ. ಆಗ ಇದೊಂದು ಲೇಯರ್ ತರ ನೀರಿನಲ್ಲಿ ತೇಲುತ್ತದೆ. ಸ್ವಲ್ಪ ಹೊತ್ತು ಬೇಯಲು ಬಿಟ್ಟು ನಂತರ ತೆಗೆದು ಉಪ್ಪು, ಮೆಣಸಿನ ಹುಡಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಸೇರಿಸಿ ಸವಿಯಿರಿ

Leave A Reply

Your email address will not be published.