ಹಾಗಲಕಾಯಿ ಟೇಸ್ಟಿ ರೆಸಿಪಿ, ಈ ಸೀಕ್ರೇಟ್ ಮಸಾಲೆ ಹಾಕಿದ್ರೆ ಕಹಿ ಮಾಯ..!

136

ಮಕ್ಕಳು ಕಹಿ ಹಾಗಲಕಾಯಿಯನ್ನು ಖಂಡಿತಾ ಇಷ್ಟಪಡುವುದಿಲ್ಲ. ಆದ್ರೆ ಅದರಲ್ಲಿರುವ ಪೋಷಕಾಂಶಗಳು ಆರೋಗ್ಯಕರ. ಹಾಗಲ ಹೊಟ್ಟೆ ಸೇರಲೂಬೇಕು, ಕಹಿಯಾಗಲೂಬಾರದು ಎಂಬಂತಹ ರೆಸಿಪಿಯೊಂದು ಇಲ್ಲಿದೆ

ಹಾಗಲಕಾಯಿ ಎಷ್ಟು ಕಹಿಯೋ ಅಷ್ಟೇ ಪೌಷ್ಟಿಕವಾಗಿದೆ. ಹಾಗಲಕಾಯಿಯನ್ನು ಇಷ್ಟ ಪಡುವವರಿದ್ದರೂ ವಿಶೇಷವಾಗಿ ಮಕ್ಕಳಂತೂ ಹಾಗಲಕಾಯಿಯಿಂದ ದೂರ ಓಡುತ್ತಾರೆ.

ಇದನ್ನು ತಯಾರಿಸುವಾಗ ಇದಕ್ಕೆ ವಿಶೇಷ ಮಸಾಲೆ ಸೇರಿಸಬೇಕಾಗುತ್ತದೆ. ನಿಮಗೋಷ್ಕರ ಇಲ್ಲಿದೆ ಸೀಕ್ರೆಟ್ ಹಾಗಲಕಾಯಿ ರೆಸಿಪಿ

1/2 ಕಪ್ ಸೋರೆಕಾಯಿ, 1 ಈರುಳ್ಳಿ (ನುಣ್ಣಗೆ ಕತ್ತರಿಸಿ), 1/2 ಟೀಸ್ಪೂನ್ ಸಾಸಿವೆ, 1 ಟೀಸ್ಪೂನ್ ಜೀರಿಗೆ, 1/2 ಟೀ ಚಮಚ ಅರಿಶಿನ, 1 ಟೀಸ್ಪೂನ್ ಮೆಣಸಿನ ಪುಡಿ, 1 1/2 ಟೀಸ್ಪೂನ್ ಕೊತ್ತಂಬರಿ ಪುಡಿ, 2 ಚಮಚ ಒಣ ಮಾವಿನ ಪುಡಿ ಇರಲಿ. ಉಪ್ಪು ರುಚಿಗೆ ತಕ್ಕಂತೆ, ಅಗತ್ಯವಿರುವ ಎಣ್ಣೆ, ನೀರು ಇರಲಿ.

ಹಾಗಲಕಾಯಿಯ ಸಿಪ್ಪೆಯನ್ನು ಸಣ್ಣದಾಗಿ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. 

ಕತ್ತರಿಸಿದ ಹಾಗಲಕಾಯಿ ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ಒಂದು ಚಮಚ ಉಪ್ಪು ಮತ್ತು ನೀರು ಸೇರಿಸಿ. ಅರ್ಧ ಗಂಟೆ ಬಿಡಿ. ಇದರಿಂದ ಕಹಿ ಕಡಿಮೆಯಾಗುತ್ತದೆ. 

ಈಗ ಅವುಗಳನ್ನು ಹೊರಗೆ ತೆಗೆದು ಇನ್ನೊಂದು ಪಾತ್ರೆಯಲ್ಲಿ ಪಕ್ಕಕ್ಕೆ ಇರಿಸಿ. 

ಸ್ಟೌ ಹಚ್ಚಿ ಪ್ಯಾನ್ ಇಡಿ. ಇದಕ್ಕೆ ಎಣ್ಣೆ ಸೇರಿಸಿ ಬಿಸಿ ಮಾಡಿ ಸಾಸಿವೆ ಮತ್ತು ಜೀರಿಗೆ ಸೇರಿಸಿ. ಒಗ್ಗರಣೆ ಸೊಪ್ಪು ಹಾಕಿ.

ನಂತರ ಎಣ್ಣೆಗೆ ಈರುಳ್ಳಿ ಸೇರಿಸಿ.  ಅದನ್ನು ಚೆನ್ನಾಗಿ ಫ್ರೈ ಮಾಡಿ.

ಸ್ವಲ್ಪ ಸಮಯದ ನಂತರ ಹಾಗಲಕಾಯಿ ಸೇರಿಸಿ. ಈಗ ಅರಶಿನ, 1 ಟೀಸ್ಪೂನ್ ಮೆಣಸಿನ ಪುಡಿ, 1 1/2 ಟೀಸ್ಪೂನ್ ಕೊತ್ತಂಬರಿ ಪುಡಿ ಬೆರೆಸಿ

ಈಗ ರಹಸ್ಯ ಮಸಾಲೆಗಳನ್ನು ಸೇರಿಸುವ ಸಮಯ. ಈಗ ಮಾವಿನ ಪುಡಿ ಬೆರೆಸಬೇಕು.

ಈಗ ಮಾವಿನ ಪುಡಿ(ಆಮ್ಚೂರ್ ಹುಡಿ) ಬೆರೆಸಬೇಕು. ಇದನ್ನು ಸೇರಿಸಿದ ನಂತರ 4 ನಿಮಿಷ ಬೇಯಿಸಿ. 

ಇದನ್ನು ಚಪಾತಿ, ದೋಸೆ, ರೊಟ್ಟಿ ಜೊತೆಗೂ ಸವಿಯಬಹುದು.

Leave A Reply

Your email address will not be published.