ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶತಮಾನದ ಕ್ರಿಶ್ಚಿಯನ್ ಸ್ಮಶಾನ ಧ್ವಂಸ

180

ಖಾನೇವಾಲ್, ಮೇ 22: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಖಾನೇವಾಲ್‌ನಲ್ಲಿರುವ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಸ್ಮಶಾನ ಹಾಗೂ ಮನೆಗಳನ್ನು ನೆಲಸಮ ಮಾಡಲಾಗಿದೆ. ಪ್ರಧಾನಿ ಇಮ್ರಾನ್ ಖಾನ್ ಪಕ್ಷ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಕಾರ್ಯಕರ್ತರು ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಜಫರ್ ಇಕ್ಬಾಲ್ ನುನಾರಿ ಸ್ಥಳೀಯ ಜಮೀನ್ದಾರನಾಗಿದ್ದಾನೆ, ಹಾಗೆಯೇ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಸದಸ್ಯ ಕೂಡ ಆಗಿದ್ದಾನೆ. ಆತನ ಗುಂಪು ಬಂದು ಸ್ಮಶಾನವನ್ನು ನೆಲಸಮಮಾಡಿ ಜಾಗವನ್ನು ವಶಪಡಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನುನಾರಿ ಹಾಗೂ ಆತನ ಸಂಚಾಲಕರು ಜೊತೆಗೆ ಅಕ್ರಮ್ ಗುಲಾಮ್ ಹೈದರ್, ಇಕ್ಬಾಲ್ ಗುಲಾಮ್ ಖಾದಿರ್ ಇನ್ನಿತರರು ಒತ್ತಾಯಪೂರ್ವಕವಾಗಿ ಸ್ಮಶಾನಕ್ಕೆ ನುಗ್ಗಿ ಟ್ರ್ಯಾಕ್ಟರ್‌ನಲ್ಲಿ ಎಲ್ಲಾ ಸಮಾಧಿಯನ್ನು ನೆಲಸಮಗೊಳಿಸಿದ್ದಾರೆ.

ಅಲ್ಲಿದ್ದ ಸ್ಥಳೀಯರು ಈ ಕೃತ್ಯವನ್ನು ತಡೆಯಲು ಸಾಕಷ್ಟು ಪ್ರಯತ್ನ ಪಟ್ಟರು.ಸಾಕಷ್ಟು ಕ್ರಿಶ್ಚಿಯನ್ನರ ಮನೆಯನ್ನು ಕೂಡ ಕೆಡವಿದ್ದು, ಅವರನ್ನು ಆ ಪ್ರದೇಶದಿಂದ ತೆರಳುವಂತೆ ಒತ್ತಾಯಿಸಿದ್ದಾರೆ.

ಕ್ರಿಶ್ಚಿಯನ್ನರ ಸಂಖ್ಯೆ ಕಡಿಮೆಯಿರುವುದರಿಂದ ಅವರ ಮೇಲೆ ದರ್ಪ ತೋರಲಾಗುತ್ತಿದೆ. ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ನರು ಕಳೆದುಕೊಂಡ ಜಾಗವನ್ನು ಮರಳಿ ಪಡೆಯುವುದು ಕಷ್ಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.