ಅಕ್ಷರ ಸಂತ ಹಾಜಬ್ಬ ಬದುಕುತ್ತಿರುವುದು ಕ್ರೈಸ್ತ ಮುಖಂಡರು ಕಟ್ಟಿಸಿಕೊಟ್ಟ ಮನೆಯಲ್ಲಿ..!

145

ಮಂಗಳೂರು(ಜ.30): ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರು ವಾಸಿಸುತ್ತಿರುವ ಮನೆಯೂ ದಾನಿಗಳ ನೆರವು. ನಾಡಿನ ಕ್ರೈಸ್ತ ಮುಖಂಡರು ಕಟ್ಟಿಕೊಟ್ಟ ಮನೆಯಲ್ಲೇ ಹಾಜಬ್ಬ ಇವತ್ತೂ ಜೀವಿಸುತ್ತಿದ್ದಾರೆ. ಇದು ಕರಾವಳಿಯ ಕೋಮ ಸೌಹಾರ್ದಕ್ಕೆ ನಿದರ್ಶನ.

ಮಗನ ದುಡಿತದಿಂದಲೇ ಜೀವನ!:

ಅನಾರೋಗ್ಯದ ಕಾರಣ ನಾನು ಈಗ ಕಿತ್ತಳೆ ಮಾರಲು ಹೋಗುತ್ತಿಲ್ಲ. ನನ್ನ ಮಗ ಪೈಂಟಿಂಗ್‌ ಕೆಲಸ ಮಾಡುತ್ತಿದ್ದಾನೆ. ಅದರಿಂದಲೇ ಜೀವನ ಸಾಗಿಸಬೇಕು. ನನಗೆ ಮೂರು ವರ್ಷದ ಹಿಂದೆ ಮಂಗಳೂರಿನ ಕ್ರೈಸ್ತ ಸಮುದಾಯದ ಮುಖಂಡರು ಅವರದೇ ಖರ್ಚಿನಲ್ಲಿ ಮನೆ ನಿರ್ಮಿಸಿಕೊಟ್ಟಿದ್ದಾರೆ. ಅದರಲ್ಲಿ ಜೀವನ ಸಾಗಿಸುತ್ತಿದ್ದೇನೆ. ಕುಟುಂಬದಲ್ಲಿ ಅಸೌಖ್ಯ ಇದ್ದರೂ ಸಂಸಾರ ನಿಭಾಯಿಸುತ್ತಿದ್ದೇನೆ ಎಂದು ಹೇಳುತ್ತಾರೆ.

ಈಗಲೂ ಶಾಲೆಯದ್ದೇ ಕನಸು!

ಮಂಗಳೂರು ಪೇಟೆಯಲ್ಲಿ ಕಿತ್ತಳೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಹಾಜಬ್ಬ ಅವರು ವಯೋಸಹಜ ಕಾರಣಕ್ಕೆ ಕಳೆದ ನಾಲ್ಕು ವರ್ಷದಿಂದ ಈ ವೃತ್ತಿಯನ್ನು ಬಿಟ್ಟಿದ್ದಾರೆ. ಆದರೆ 68ರ ಈ ಇಳಿವಯಸ್ಸಿನಲ್ಲೂ ತಾನು ಸ್ಥಾಪಿಸಿದ ಶಾಲೆ ಬಗ್ಗೆ ಕನವರಿಸುವುದನ್ನು ಬಿಟ್ಟಿಲ್ಲ. ಮಾತ್ರವಲ್ಲ ಶಾಲೆ ಬಗ್ಗೆ ಸದಾ ಚಿಂತನೆಯಲ್ಲೇ ಕಚೇರಿ, ಜನಪ್ರತಿನಿಧಿಗಳ ಬಳಿ ಎಡತಾಕುತ್ತಿದ್ದಾರೆ.

ಕ್ರೈಸ್ತರು ನಿರ್ಮಿಸಿಕೊಟ್ಟ ಸ್ವಂತ ಮನೆಯಲ್ಲಿ ಜೀವನ. ಪತ್ನಿ ಹಾಗೂ ಇಬ್ಬರು ಪುತ್ರಿಯರು, ಒಬ್ಬನೇ ಮಗ ಪೈಟಿಂಗ್‌ ಕೆಲಸ ಮಾಡುತ್ತಿದ್ದಾನೆ. ಆತ ಕುಟುಂಬ ಪೋಷಣೆ ಮಾಡಬೇಕು. ಸರ್ಕಾರ ನೀಡುವ ಪೆನ್ಶನ್‌, ಉಚಿತ ಅಕ್ಕಿ, ಕೋಲಾರದ ವ್ಯಕ್ತಿಯೊಬ್ಬರು ನೀಡುವ ಕಿಂಚಿತ್‌ ಮೊತ್ತ, ಮೊಬೈಲ್‌ಗೆ ರಿಚಾರ್ಜ್ ಮಾಡಿಕೊಡುತ್ತಿರುವ ತುಮಕೂರಿನ ಟೀಚರ್‌. ಇವೇ ಸದ್ಯಕ್ಕೆ ಹಾಜಬ್ಬರ ಬದುಕಿಗೆ ಬೆನ್ನೆಲುಬಾಗಿವೆ.

ಇನಾಮು ಮೊತ್ತ ಶಾಲೆಗೆ!:

ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದ ಬಳಿಕ ಮಂಗಳವಾರ ಹಾಜಬ್ಬ ಅವರಿಗೆ ಯೇನೆಪೋಯ ವಿವಿ ವತಿಯಿಂದ .1 ಲಕ್ಷ ಮೊತ್ತದ ಚೆಕ್‌ ನೀಡಲಾಗಿತ್ತು. ಅಲ್ಲದೆ ಸಂಘಟನೆಯೊಂದರಿಂದ .10 ಸಾವಿರ ನೀಡಿದ್ದರು. ಈ ಎಲ್ಲ ಮೊತ್ತವನ್ನು ಹಾಜಬ್ಬರು ಶಾಲೆಗೇ ಅರ್ಪಿಸಿದ್ದಾರೆ.

Leave A Reply

Your email address will not be published.