ಮಂಡ್ಯ: ಕ್ರಿಶ್ಚಿಯಾನಿಟಿಗೆ ಮತಾಂತರ ಆರೋಪ, ಯುವಕರಿಗೆ ಥಳಿತ
ಮಂಡ್ಯ(ಡಿ.16): ಮತಾಂತರ ಮಾಡುತ್ತಿದ್ದಾರೆಂಬ ಆರೋಪದಲ್ಲಿ ಕ್ರಿಶ್ಚಿಯನ್ ಯುವಕರಿಗೆ ಥಳಿಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಜನರಿಗೆ ಆಮಿಷ ಒಡ್ಡಿ, ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮತಾಂತರ ಮಾಡ್ತಿದ್ದಾರೆಂಬ ಆರೋಪದ ಮೇಲೆ ಗ್ರಾಮಸ್ಥರು ಕ್ರಿಶ್ಚಿಯನ್ ಯುವಕರಿಗೆ ಥಳಿಸಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಮಾರಕಾಡ ದೊಡ್ಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ.
ಜನರಿಗೆ ಆಮಿಷ ಒಡ್ಡಿ, ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. 6ಜನ ಕ್ರಿಶ್ಚಿಯನ್ ಯವಕರಿಗೆ ಗ್ರಾಮಸ್ಥರು ಥಳಿಸಿದ್ದು, ಜಾನ್ ರಿದ್ಯಾ, ಪ್ರೇಮ್, ಕುಮಾರ್, ಸಂಪತ್, ಕಾರ್ತಿಕ್, ಪ್ರಶಾಂತ್ ಹಲ್ಲೆಗೊಳಗಾದ ಯುವಕರು. ಮದ್ದೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಗ್ರಾಮಸ್ಥರು ಯುವಕರನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.