ದಶಕದ ಕೊನೆಯ ಚಂದ್ರಗ್ರಹಣ ಗೋಚರ: ಯಾವಾಗ? ಯಾವ ಸಮಯ?
ನವದೆಹಲಿ: 2020ರ ಮತ್ತು ಈ ದಶಕದ ಕೊನೆಯ ಚಂದ್ರಗ್ರಹಣ ನವೆಂಬರ್ 30ರಂದು ಸಂಭವಿಸಲಿದೆ. ಈ ಬಾರಿ ಉಪಛಾಯಾ ಚಂದ್ರಗ್ರಹವು ನವೆಂಬರ್ 30ರ ಸೋಮವಾರದಂದು ಕಾರ್ತಿಕ ಪೂರ್ಣಿಮೆಯಂದು ಜರುಗಲಿದೆ. ಖಗೋಳ ತಜ್ಞರ ಪ್ರಕಾರ ಮುಂದಿನ ವಾರ ನಡೆಯಲಿರುವ ಚಂದ್ರ ಗ್ರಹಣವು 2020ರ ದಶಕದ ಕೊನೆಯ ಚಂದ್ರಗ್ರಹಣವಾಗಲಿದೆ. ಈ ಬಾರಿಯ ಚಂದ್ರ ಗ್ರಹಣವು ವೃಷಭರಾಶಿ ಮತ್ತು ರೋಹಿಣಿ ನಕ್ಷತ್ರದವರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಹಾಗೆಯೇ ಇತರೆ ಎಲ್ಲ ರಾಶಿಯವರ ಮೇಲೆಯೂ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.
ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು ಎಂಬ ಸಾಂಪ್ರದಾಯಿಕ ನಂಬಿಕೆ ಇದೆ. ಆದರೆ ಇದಕ್ಕೆ ಯಾವುದೇ ಧಾರ್ಮಿಕ ಮಹತ್ವದ ಹಿನ್ನಲೆಯಿಲ್ಲ. ಪ್ರತಿ ಚಂದ್ರಗ್ರಹಣದ ಸಂದರ್ಭದಲ್ಲಿ ಮಂತ್ರ ಪಠಣ ಮತ್ತು ಧ್ಯಾನ ಮಾಡುವಂತೆ ಸೂಚಿಸಲಾಗುತ್ತದೆ. ಆದರೆ ಇದು ಉಪಛಾಯಾ ಚಂದ್ರಗ್ರಹಣವಾಗಿರುವುದರಿಂದ ಸೂತಕ ಇರುವುದಿಲ್ಲ.
ಚಂದ್ರಗ್ರಹಣದ ದಿನಾಂಕ, ಸಮಯ:
ಚಂದ್ರಗ್ರಹಣದ ಸಮಯ: ನವೆಂಬರ್ 30ರಂದು ಮಧ್ಯಾಹ್ನ 1.04ಕ್ಕೆ
ಗ್ರಹಣದ ಮಧ್ಯಭಾಗ: ಮಧ್ಯಾಹ್ನ 3.೧೩
ಗ್ರಹಣ ಬಿಡುವ ಸಮಯ: ಸಂಜೆ 5.22