ರಕ್ಷಣಾ ಸಚಿವರ ಹುದ್ದೆಗೆ ಆಸ್ಟಿನ್‌?

320

ವಾಶಿಂಗ್ಟನ್‌: ಅಮೆರಿಕದ ರಕ್ಷಣಾ ಸಚಿವರನ್ನಾಗಿ ನಿವೃತ್ತ ಸೇನಾಧಿಕಾರಿ ಲೊಲಾಯ್ಡ ಜೆ.ಆಸ್ಟಿನ್‌ ಅವರನ್ನು ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ನಾಮ ನಿರ್ದೇಶನ ಮಾಡಿದ್ದಾರೆ. ಸೆನೆಟ್‌ನಿಂದ ಅನುಮತಿ ದೊರೆಯಿತು ಎಂದರೆ, ಪೆಂಟಗನ್‌ ಅನ್ನು ಮುನ್ನಡೆಸಲಿರುವ ಮೊದಲ ಆಫ್ರಿಕನ್‌-ಅಮೆರಿಕನ್‌ ಎನ್ನುವ ಗರಿಮೆ ಆಸ್ಟಿನ್‌ ಅವರದ್ದಾಗಲಿದೆ.

40 ವರ್ಷಗಳವರೆಗೆ ಅಮೆರಿಕನ್‌ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಆಸ್ಟಿನ್‌ ಅವರು 2016ರಲ್ಲಿ ನಿವೃತ್ತಿಪಡೆದಿದ್ದರು. ಅಮೆರಿಕದ ಸೆಂಟ್ರಲ್‌ ಕಮಾಂಡ್‌ ಅನ್ನು ಮುನ್ನಡೆಸಿದ ಮೊದಲ ಆಫ್ರಿಕನ್‌-ಅಮೆರಿಕನ್‌ ಕಮಾಂಡರ್‌ ಎನ್ನುವ ಗರಿಮೆಯೂ ಅವರಿಗಿದ್ದು, ಇರಾಕ್‌ ಮತ್ತು ಸಿರಿಯಾದಲ್ಲಿ ಐಸಿಸ್‌ ವಿರುದ್ಧದ ಹೋರಾಟದ ರೂಪುರೇಷೆ ರಚಿಸಿದ ತಂಡದಲ್ಲಿದ್ದವರು. ಇನ್ನು ಒಬಾಮಾ ಅವಧಿಯಲ್ಲಿ 1.50 ಲಕ್ಷಅಮೆರಿಕನ್‌ ಯೋಧರನ್ನು ಇರಾಕ್‌ನಿಂದ ವಾಪಸ್‌ ಕರೆಸಿಕೊಳ್ಳುವಲ್ಲೂ ಅಂದಿನ ಉಪಾಧ್ಯಕ್ಷ ಜೋ ಬೈಡೆನ್‌ ಜತೆ ಕೆಲಸ ಮಾಡಿದ್ದರು ಆಸ್ಟಿನ್‌.

Leave A Reply

Your email address will not be published.