ಟರ್ಕಿ, ಗ್ರೀಸ್ ನಡುಗಿಸಿದ ಭಾರಿ ಭೂಕಂಪ, ಮಿನಿ ಸುನಾಮಿ ಅಲರ್ಟ್

243

ಟರ್ಕಿ ಮತ್ತು ಗ್ರೀಸ್ ದೇಶವನ್ನು ಇಂದು ಭಾರಿ ಭೂಕಂಪನವು ನಡುಗಿಸಿದೆ. ಭೂಕಂಪದ ತೀವ್ರತೆಗೆ ಟರ್ಕಿಯ ಇಜ್ಮಿರ್‌ನ ಹಲವಾರು ಭಾಗಗಳಲ್ಲಿ ಕಟ್ಟಡಗಳು ಕುಸಿದು ಬಿದ್ದಿವೆ. ರಿಕ್ಚರ್ ಮಾಪಕದಲ್ಲಿ 7 ರಷ್ಟು ತೀವ್ರತೆ ಕಂಡು ಬಂದಿದೆ.

ಜನರು ಭಯದಿಂದ ಬೀದಿಗಳಲ್ಲಿ ಓಡಿದ್ದಾರೆ. ಪೆಸಿಫಿಕ್ ಮಹಾಸಾಗರದಲ್ಲಿ ಕೇಂದ್ರ ಬಿಂದು ಕಂಡು ಬಂದಿದ್ದು, ಮಿನಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಕಂಪದ ಪರಿಣಾಮ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದು ಮತ್ತು 120 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಭೂಕಂಪನವು ಟರ್ಕಿಯ ರಾಜಧಾನಿ ಇಸ್ತಾಂಬುಲ್ ಮತ್ತು ಗ್ರೀಸ್‌ನ ರಾಜಧಾನಿ ಅಥೆನ್ಸ್ ಮೇಲೂ ಪರಿಣಾಮ ಬೀರಿದೆ. ಇಜ್ಮಿರ್ ನಗರದಲ್ಲಿ ಈವರೆಗೆ ಆರು ಕಟ್ಟಡಗಳು ಕುಸಿದಿವೆ ಎಂದು ಟರ್ಕಿ ಅಧಿಕಾರಿಗಳು ಹೇಳಿದ್ದಾರೆ.

ಟರ್ಕಿ ವಿವಿಧ ನಗರಗಳಲ್ಲಿ ಕಟ್ಟಡ ಕುಸಿತ, ಭಗ್ನಾವಶೇಷಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಭೂಕಂಪ ಮತ್ತು ಸುನಾಮಿಯಿಂದ ವ್ಯಾಪಕವಾದ ಆಸ್ತಿಪಾಸ್ತಿ ಹಾನಿಯಾಗಿದೆ.

ಏಜಿಯನ್ ಸಮುದ್ರದಲ್ಲಿ 16.5 ಕಿ.ಮೀ ಆಳ ಹಾಗೂ ಟರ್ಕಿಯ ಈಶಾನ್ಯಕ್ಕೆ 13 ಕಿ.ಮೀ ಆಳದಲ್ಲಿ ಕಂಪನ ಕೇಂದ್ರ ಬಿಂದು ಗುರುತಿಸಲಾಗಿದೆ.

ಟರ್ಕಿಯಲ್ಲಿ ಭಾರಿ ಚಳಿ ವಾತವರಣವಿದ್ದು, ಭೂಕಂಪದಿಂದ ತತ್ತರಿಸಿ ಆತಂಕದಿಂದ ಮನೆಯಿಂದ ಓಡಿದವರಿಗೆ ಆಶ್ರಯ ನೀಡಲಾಗುತ್ತಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಅಗತ್ಯ ನೆರವು ಪಡೆದುಕೊಳ್ಳುವಂತೆ ಅಧ್ಯಕ್ಷ ರೆಸಿಪ್ ತಯ್ಯಬ್ ಎರ್ದೊಗಾನ್ ಮನವಿ ಮಾಡಿದ್ದಾರೆ.

ಟರ್ಕಿಯ ಪೂರ್ವಭಾಗದಲ್ಲಿ 2020ರ ಜನವರಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 20ಕ್ಕೂ ಅಧಿಕ ಮಂದಿ ಮೃತರಾಗಿದ್ದರು,400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

1999 ರಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಸ್ತಾನ್ ಬುಲ್ ನಲ್ಲಿ 1,000 ಮಂದಿ ಸೇರಿದಂತೆ 17,000 ಜನರು ಸಾವನ್ನಪ್ಪಿದರು.

Leave A Reply

Your email address will not be published.